ಕಂಡ ಮನದ ಮಾತಿಗೆ ! ಮೌನದಲೇ ಒಪ್ಪಿಗೆ !
ಅರಿತುಕೊಂಡ ಮನ ! ಸೋತಿದೆ ನಿನ್ನ ಸ್ನೇಹದ ಪ್ರೀತಿಗೆ !
ಇಷ್ಟಪಟ್ಟು ಕಂಡ ಕನಸದು ! ಸ್ನೇಹವೆಂಬ ದೀವಿಗೆ !
ಬೆಳಗಲಿ ಇಬ್ಬರ ಮನವ ! ನಿರ್ಮಲ ಸ್ನೇಹದ ರೀತಿಗೆ !
ಬದುಕು ಒಂದೇ ! ಭರವಸೆ ಬೇಕು !
ಆದರೆ ಹೃದಯ ವೆರಡು ಬೆಳಗಬೇಕು !
ಸ್ನೇಹದ ಹೊಸ ಕಾವ್ಯವ ಬರೆಯಬೇಕು !
ಹೊಸ ರೀತಿಯಲಿ ಸ್ನೇಹದ ಲೋಕ ಕಟ್ಟಬೇಕು !
ನಾನು ಹೆಚ್ಚು , ನೀನು ಹೆಚ್ಚು ಎಂಬುದೆಲ್ಲ ಮುಖ್ಯವಲ್ಲ !
ನಿರ್ಮಲ ಮನದ ಸ್ನೇಹ ಇದ್ದರೆ ಚಿಂತೆಯಿಲ್ಲ !
ನೀನು ನಾನು ಒಂದೇ ಇಲ್ಲಿ ಸ್ನೇಹದ ಲೋಕದಿ !
ತೊಳೆದು ಹಾಕುವ ದುಃಖ ಮನಸಿನ ಬೇಗುದಿ !
ಕಟ್ಟಿಕೊಂಡರೆ ಕನಸಾಗುತ್ತದೆ ಸ್ನೇಹ ! ಇಬ್ಬರ ನಡುವಿನಲ್ಲಿ !
ಹಚ್ಚಿಕೊಂಡರೆ ಬದುಕಾಗುತ್ತದೆ ! ಇಬ್ಬರ ಹೃದಯದಲ್ಲಿ !
ಬೆಳಗುತಿರಲಿ ! ಅರಳುತಿರಲಿ ಸ್ನೇಹದ ಸುಮಗಳು !
ಬಾಡದಿರಲಿ !ಕಾಡದಿರಲಿ ! ಸ್ನೇಹದ ಭಾವಗಳು !
ಒಪ್ಪಿಕೊಂಡು , ಅಪ್ಪಿಕೊಂಡರೆ ಎಂತಹ ಸುಂದರ ಬಾಳು !
ನಗುತಿರಲಿ ಸ್ನೇಹದಲಿ ! ಇಬ್ಬರ ಹೃದಯಗಳು !
ಬದುಕು ಕರೆದ ಹಾಗೆ ಹೋಗೋಣ ಇಬ್ಬರು !
ಸಂದಿಸಬೇಕಲ್ಲವೇ ! ಎಂದಾದರೂ ಒಂದು ದಿನ ಒಬ್ಬರನ್ನೊಬ್ಬರು !

No comments:
Post a Comment