ಈ ಸ್ನೇಹ ಅನ್ನೋದು ಅನೀರಿಕ್ಷಿತವಾಗಿ ಹುಟ್ಟಿ ಬೆಳೆಯುತ್ತೆ... But ಹಾಗೆ ಹುಟ್ಟಿದ ಸ್ನೇಹ ಪರಸ್ಪರ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ತಾ.., ನೋವನ್ನ, ದುಃಖವನ್ನು ಹಂಚಿಕೊಳ್ತಾ ಬೆಳೆದು ಕೆಲವೊಂದು ಸಲ ಅದೆಷ್ಟೋ ಜನ್ಮದ ಸಂಬಂಧದ ಹಾಗೆ ಅನ್ನಿಸಿ ಬಿಡ್ತದೆ ಅಲ್ವಾ... ನಾವು ತಂದೆ, ತಾಯಿ And ಬಂಧುಗಳು ಇಲ್ಲದೆ ಇರೋ ಅದೆಷ್ಟೋ ಜನ ಅನಾಥರನ್ನ ಪ್ರತಿನಿತ್ಯ ನೋಡಿರುತ್ತೀವಿ But Friend ಇಲ್ಲದೆ ಇರೋವಂತ ವ್ಯಕ್ತಿಯನ್ನು ಯಾರನ್ನನಾದರೂ ನೋಡಿರಲಿಕ್ಕೆ ಸಾಧ್ಯಾನಾ..ಖಂಡಿತಾ ಹುಡುಕಿದರೂ ಕೂಡ ಯಾರು ಸಿಗಲ್ಲ..! ತಂದೆ, ತಾಯಿ ಮಮತೆಯಿಂದ ವಂಚಿತರಾಗಬಹುದು, ಬಯಸಿದ ಪೀತಿಯಿಂದಲೂ ವಂಚಿತರಾಗಬಹುದು ಆದ್ರೆ ಸ್ನೇಹದಿಂದ ಯಾರೂ ವಂಚಿತರಾಗೋಕೆ ಸಾಧ್ಯವಿಲ್ಲ.. ಅದೇ ಸ್ನೇಹಕ್ಕಿರೂ ಮಹತ್ವ..! ಎಲ್ಲಾ ಸಂಬಂಧಗಳೂ ಕೂಡ ಪ್ರತಿಯಾಗಿ ನಮ್ಮಿಂದ ಏನನ್ನಾದರೂ Expectಮಾಡ್ತವೆ... ಆದ್ರೆ ಇಲ್ಲಿ ಸ್ನೇಹ ಮಾತ್ರ ತುಂಬಾ ವಿಶಿಷ್ಟವಾಗಿ ನಿಲ್ಲುತ್ತೆ..! For Example ತಾಯಿಯೊಡನೆ ಇರಬೇಕಾದ "ಸಹನೆ", ತಂದೆಯೊಡನೆ ಇರಬೇಕಾದ "ಭಯ", ಹಿರಿಯರಿಗೆ ಕೊಡಬೇಕಾದ "ಗೌರವ" ಯಾವುದರ ಅವಶ್ಯಕತೆನೂ ಸ್ನೇಹಕ್ಕೆ ಬೇಕಾಗಿಲ್ಲ... ಸ್ನೇಹಕ್ಕೆ ಬೇಕಾದ್ದು ಕೇವಲ ರಹಸ್ಯಗಳಿಲ್ಲದ ಮುಕ್ತ ಶುದ್ಧ ಮನಸ್ಸು ಜೊತೆಗೆ ಬೊಗಸೆ ಪ್ರೀತಿ ಅಷ್ಟೆ..!!
Basically ಸ್ನೇಹ ಹುಟ್ಟೋದು "ಅವಶ್ಯಕತೆಗೆ"... ಅಂದರೆ ತಂದೆ, ತಾಯಿ And Family ಜೊತೆ ಎಷ್ಟೇ Close ಆಗಿದ್ದರೂ ಕೂಡ.., ಕೆಲವೊಂದು ವಿಷಯಗಳನ್ನ, ಮನಸ್ಸಿನ ಭಾವನೆಗಳನ್ನ ಅವರ ಜೊತೆ Share ಮಾಡಿಕೊಳ್ಳೋಕೆ ಆಗಲ್ಲಾ ಅಂತಾ ಸಂದರ್ಭದಲ್ಲಿ ಒಂದು ಮನಸ್ಸು ತಾನೇ ತಾನಾಗಿ ತನ್ನನ್ನ ಅರ್ಥ ಮಾಡಿಕೊಳ್ಳೋ ಇನ್ನೊಂದು ಮನಸ್ಸನ್ನ Expect ಮಾಡೋದು ಸಹಜನೇ ಅಲ್ವಾ... ಹಾಗೆ ಸ್ನೇಹದಲ್ಲಿ ವಯಸ್ಸಿನ ಭೇದ-ಭಾವವಾಗಲಿ ಅಥವಾ ಗಂಡು-ಹೆಣ್ಣು ಅನ್ನೋ ಭೇದ-ಭಾವವಾಗಲಿ ಇರೋದಿಲ್ಲ... ಅದು ಬಯ
ಸೋದು ಕೇವಲ ತನ್ನನ್ನ ಅರ್ಥ ಮಾಡಿಕೊಳ್ಳೋ ಇನ್ನೊಂದು ಮನಸ್ಸನ ಅಷ್ಟೆ..!!
Collegeನಾ First Day ಎಲ್ಲಾ ಹೊಸತು.., ನಮಗೆ ಅಲ್ಲಿ ಯಾರ ಪರಿಚಯನೂ ಇಲ್ಲಾ.., ಮನಸ್ಸಿನಲ್ಲಿ ಒಂದು ಸಣ್ಣ ಅಳುಕು ಇಟ್ಟಿಕೊಂಡೇ ಹೋಗಿರುತ್ತೀವಿ... ಅದೇ ಭಯದಲ್ಲೆ Class Roomಗೆ ಹೋಗಿ ಕೂತ್ಕೊಂಡಾಗ ಅಲ್ಲೇ ಪಕ್ಕದಲ್ಲಿ ಕೂತಿರೋರು ನಮ್ಮನ್ನ ನೋಡಿ ಒಂದು ಸಣ್ಣ Smile ಮಾಡ್ತಾರೆ... ಕೇವಲ ಆ ಒಂದು ನಗು ಸಾಕಾಗಿ ಹೋಗುತ್ತೆ ಸ್ನೇಹಕ್ಕೆ... ಮೊದಲೆ ಭಯ ಆವರಿಸಿರೋ ಮನಸ್ಸಿಗೆ ಆ ಸಣ್ಣ ನಗು "ನಾನಿದ್ದೀನಿ Every Thing Will Be All Right" ಅನ್ನೋ ಒಂದು ಸಂದೇಶನಾ ಕೊಟ್ಟಿರುತ್ತೆ..!! ಅಲ್ಲಿಂದ ಶುರುವಾಗೋ ಅವರ ಗೆಳೆತನ ದಿನಗಳು ಉರುಳಿದ ಹಾಗೆ ಜೀವಕ್ಕೆ ಜೀವ ಕೊಡೋ Friends ಆಗಿ ಹೋಗ್ತಾರೆ..!! ಇಂಥ ಸ್ನೇಹಕ್ಕೆ ಒಂದು ನಮನ ಸಲ್ಲಿಸಲೇಬೇಕಲ್ವ...
"ಕೊಡುವುದು ಬೇಡ ಜೀವಕ್ಕೆ ಜೀವ..
ಹಂಚಿಕೊಂಡರೆ ಸಾಕು ನನ್ನೊಡಲ ನೋವ"
1 comment:
nice ram.........
Post a Comment