ಕಣ್ಣ ರೆಪ್ಪೆಯಲ್ಲಿ ನನ್ನ ಕರೆಯುವ ನಿನ್ನ ಕಣ್ಣುಗಳಿಗಾಗಿ
ನಾ ಕಾಯುತ್ತಿರುವೆ,
ನಿನ್ನ ಮಾತಿನಲ್ಲಿ ನನ್ನ ಮನದ ಕಿಸೆಯನ್ನು ತುಂಬುವ ಪದಗಳಿಗಾಗಿ
ನಾ ಕಾಯುತ್ತಿರುವೆ,
ನವಿಲಿನಂತೆ ನಡೆಯುವ ನಿನ್ನ ನಡಿಗೆಯಲ್ಲಿ ಸೇರಲು
ನಾ ಕಾಯುತ್ತಿರುವೆ,
ಮೋಹಕ ನಗುವಿನಿಂದ ನನ್ನನ್ನು ಕೊಂದ ನಿನ್ನ ನಗುವಿಗಾಗಿ
ನಾ ಕಾಯಿತ್ತಿರುವೆ,
ಆಸೆಗಳಿಗೆ ನೀರನು ಚೆಲ್ಲೋ ನಿನ್ನ ತುಂಟತನಕ್ಕಾಗಿ
ನಾ ಕಾಯುತ್ತಿರುವೆ,
ನನ್ನ ಮನದಾಳದ ರೂಪಸಿ ನಿನ್ನ ಸವಿಯುವ ಅಸೆ ಇಂದಲೇ
ನಾ ಕಾಯುತ್ತಿರುವೆ
ಹೇಳು ನೀನು ಎಲ್ಲಿರುವೆ
ನಿನಗಾಗಿ ನಾ ಕಾಯುತ್ತಿರುವೆ
ನಿಮ್ಮವನು
ರಾಮ್ ಅಜೇಕಾರ್
No comments:
Post a Comment