Search This Blog

Sunday, September 4, 2011

"ಮಾಯದ ಮನಸಿಗೆ ಕಳ್ಳ ಹೃದಯದ ಪರಚಯ"

"ಗಾಯದ ಕನಸಿಗೆ ಸುಳ್ಳು ನೆನಪಿನ ಪರಿಚಯ"

"ಸಾಯದ ಪ್ರೀತಿಗೆ ನಲ್ಮೆಯ ಮೊಗದ ಪರಿಚಯ"

"ಹಾಯಾದ ದಾರಿಗೆ ಪಾದವಿಡುವ ಮುತ್ತಿನ ಪರಿಚಯ"

"ನೋವಾದ ಹೃದಯಕ್ಕೆ ವಲ್ಲದ ಸಾಂತ್ವನದ ಪರಿಚಯ"

"ಹಳೆಯ ನೆನಪುಗಳಿಗೆ ಹೊಸ ತುಡಿತಗಳ ಪರಿಚಯ"

"ಖಾಲಿ ಕೈಗಳಿಗೆ ಜೊತೆಯಾದ ಕೈಗಳ ಪರಿಚಯ"

"ಒಂಟಿ ಬಾಳಲ್ಲಿ ಪ್ರೀತಿ ಮರೆತ ಸಮಯದ ಪರಿಚಯ"

"ನನಗೆ ನುಮ್ಮ ನಿಮಗೆ ನನ್ನ ಹೊಸದಾದ ಪರಿಚಯ"

ಪರಿಚಯದಿಂದ ದೂರ ಸರಿದ, ಮರೆತು ಹೋದ ಹಳೆಯ ನೆನಪುಗಳ
ಮೆಲುಕು ಹಾಕಲು., ಕಳೆಕೊಂದಿರುವವರನ್ನು ಹುಡುಕಲು, ತೊರೆದವರನ್ನು
ಮರೆಯಲು, ನನ್ನ ಪರಿಚಯದಿಂದ ನಿಮಗೆ ಸಲ್ಪ ಮಟ್ಟಿನ ಖುಷಿ, ನೆಮ್ಮದಿ
ಸಿಗುವುದಾದರೆ ಬನ್ನಿ ನನ್ನ ಪರಿಚಯಕ್ಕೆ.....



No comments: