Search This Blog

Sunday, September 4, 2011

ನಿನ್ನೊಲುಮೆಯ ಅರಿಯದವರ ನೀ ಪ್ರೀತಿಸಿ ಪ್ರಯೋಜನವೇನು ?
ನಿನ್ನುಸಿರಿನಲಿ ತನ್ನುಸಿರ ಬೆರೆಸದೆ ಹೋದವರ ನೆನೆದು ಆಗುವುದೇನು ?
ಸ್ವಾರ್ಥ ತುಂಬಿದ ಮನಸಿನಲಿ ನಿಸ್ವಾರ್ಥ ಗೆಳೆತನವ ಹುಡುಕಲು ಸಾದ್ಯವೇನು ?
ಮುಖವಾಡದಲಿ ಅಡಗಿಸಿದ ಬಣ್ಣ ಬಣ್ಣದ ಮುಖವನು ಅರಿಯಲು ಆಗುವುದೇನು ?
ಎಲ್ಲ ಇದೆ ! ನಿನ್ನೆದೆರು ! ಎಂದರೂ ! ನೀ ಆರಿಸಿ ಕೊಂಡ ದಾರಿ ಏನು ?
ನಲಿಯುವಾಗ ಬರುವ ನೆಂಟರು ! ನಿನ್ನ ಕಷ್ಟದಲಿ ! ಪರಾರಿಯದರೇನು!
ನಲಿವಿರುವಾಗ ,ಕಾಣದ ಸ್ನೇಹ ಪ್ರೀತಿಯನು ! ಈಗ ಕಾಣಲು ಸಾದ್ಯವೇನು ?
ಅರ್ಥವಿಲ್ಲದ ಪ್ರಶ್ನೆ ! ಉತ್ತರವಿಲ್ಲದ ಬದುಕು ! ಎರಡರ ನಡುವೆ ! ಸಾಗುತಿರುವೆಯ ನೀನು ?
ಕಾಣದ ಲೋಕದಲಿ ! ಕೈ ಹಿಡಿದು ನೀ ಸ್ನೇಹದ ಹಾದಿಯಲಿ ನಡೆಸುವೆಯೇನು ?
ನಿನ್ನ ನಿರ್ಮಲ ಸ್ನೇಹದಿ ! ಮನಕೆ ಬೆಳಕ ತುಂಬ ಬಲ್ಲೆಯಾ ನೀನು ?
ಕಂಡಷ್ಟು ದೂರ !ಕಣ್ಣು ಹಾಯಿಸುವಷ್ಟು ದೂರ ! ಕಾಣುವ ಸಾಗರದ ಅಲೆಯ ! ಕಂಡಿರುವೆಯ ನೀನು ?
ಅರಿತು ಕೊಂಡ ನನ್ನ ಮನ ! ಅರಳಿಸಿ ನಿಮ್ಮ ಮನ ! ನನ್ನ ಸ್ನೇಹದ ಜೊತೆಗೆ ಬರುವಿರೇನು ?


No comments: