Search This Blog

Sunday, September 4, 2011

ram cute feeelings

ಪ್ರೀತಿಯ
ಬೇಡವೇನಿಸಿದರೂ ಕೇಳದು
ಹಾಳಾದ ಮನಸ್ಸು,
ಬರಡಾದ ಭೂಮಿಯಲಿ
ಚೂರು-ಚೂರಾದ ಮನಸ್ಸಿನಲಿ
ನೋವು ತುಂಬಿದ ಹೃದಯಗಳ
ಚೂರುಗಳ ಅವಶೇಷಗಳಡಿಯಲಿ
ಬರೆಯುತಿಹೆ ನಾ....
ನಿನ್ನ ಕಪಟ ಪ್ರೀತಿ-ಪ್ರೇಮದ ಕತೆಯನ್ನ...
"........."ತೈಲವರ್ಣದ ಆಕೃತಿಯಾಗಿ
ಜನ ಮನದಲ್ಲಿರುವುದಕ್ಕಿಂತ,
ಕಣ್ಮುಚ್ಚಿದಾಗ ಗೋಚರಿಸುವ
ಸ್ಫೂರ್ತಿಯಾಗಬಾರದಿತ್ತೇ...
ನನ್ನ ಬಾಳ ಬಂಧನದಿ
ನೀ ಬರೇದ ಕಾದಂಬರಿಯಾಗಿ ಹರಡುವೆ ಎಂದು
ತಿಳಿದಿದ್ದೆ...
ಎಲ್ಲಾ ಹೇಳಿದರೂ.......
ನಮ್ಮದು ಶೃಂಗಾರ-ಕಾವ್ಯ ಎಂದು
ಆದರೆ
ನೀ
ಕಾವ್ಯದಂತೆ ಅರ್ಥವಾಗದೇ ಉಳಿದು ಬಿಟ್ಟೆಯಲ್ಲೇ
ನನ್ನ
ಮನಸ್ಸಿನ ಅಂತರಾಳಕ್ಕಿಳಿಯದೇ......
ಹಸ್ತ-ಪ್ರತಿಯ ಅಕ್ಷರವಾದೇಯಲ್ಲೇ. "......."
ಪ್ರೀತಿಯಿಂದ- ಪ್ರೀತಿಗಾಗಿ...


No comments: