ಮುನ್ನೂರು ದಿನ ನನ್ನನ್ನು ಹೊತ್ತವಳು
ನಾ ಕಣ್ಣು ಬಿಡೊದನ್ನೇ ಕಾದು ಕೂತವಳು
ನನಗಾಗಿ ಬರಿ ಕಷ್ಟಗಳನ್ನೇ ನುಂಗಿದವಳು
ಅಂತಿಮವಾಗಿ ನಾ ಬರುವ ಮುನ್ನ ನೋವಾನ್ನು ಮಾತ್ರ ಪಡೆದವಳು
ಅವಳ ರಕ್ತವನ್ನು ನನಗೆ ಆಹಾರವಾಗಿಸಿದವಳು
ನಾ ನಡೆಯಲು ಆಸೆ ಪಟ್ಟಾಗ ನನ್ನ ಜೊತೆ ಸೇರಿ ಹೆಜ್ಜೆ ಹಾಕಿದವಳು
ನನಗೆ ನೋವಾದಾಗ, ನನಗೂ ಮೊದಲೇ ಕಣ್ಣಿರು ಹಾಕುವವಳು
ನಾ ನಿದ್ರಿಸಿದರೂ, ತಾನು ನಿದ್ರಿಸದೆ ನನ್ನ ಕಾದವಳು
ನಾ ನಗುವಾಗ ನನ್ನ ಜೊತೆ ಸೇರಿ ನಗುವವಳು
ಕಷ್ಟಗಳನ್ನು ನನಗೆ ಕಾಣಿಸದ ಹಾಗೆ ಬೆಳಸಿದಳು
ಯಾರ ಮುಂದೆಯೂ ನನ್ನ ಬಿಟ್ಟು ಕೊಡದವಳು
ಅವಳು ನನ್ನ ಅಮ್ಮ !
No comments:
Post a Comment