ಯಶಸ್ವಿ ಜೀವನದ ಗುಟ್ಟು ಎಲ್ಲಿರುತ್ತೋ
ಗೊತ್ತಿಲ್ಲ... ದಿನ ಕಳೆಯುತ್ತಾ ಹೋದಂತೆ ವಯಸ್ಸು ಹೆಚ್ಚುತ್ತಾ ಹೋಗುತ್ತದೆ ಅದು ಸಹಜ
... ತನ್ನ ಇರುವಿಕೆಯ ದಿನಗಳು ಕಡಿಮೆ ಯಾಗುತ್ತಿವೆ... ಅಲ್ವಾ ಆತ ಬಡವ ಬಲ್ಲಿದನೆ ,ಆಗಲಿ
ಶ್ರೀ ಮಂತನೆ ಆಗಲಿ ...ಶಾಶ್ವತವಲ್ಲ ...ತಾತ್ಕಾಲಿಕ ಬದುಕು.......ವಿಷಯ ಕ್ಕೆ
ಬರೋಣ..
......ಮಿತ್ರನೊಬ್ಬ ಕರೆಮಾಡಿದ್ದ ಆದರೆ
ಉತ್ತರಿಸಲಾಗದೆ ವಾಟ್ಸಪ್ಮೆಸೆಜ್ ಹಾಕಿ ಎ.ಜೆ.ಆಸ್ಪತ್ರೆ ಗೆ ಸುಳ್ಯದ ಜಾನಕಿ ಯವರಿಗೆ
ರಕ್ತ ಬೇಕಾಗಿದೆ ರಾಂ ಎಂದು ಮೆಸೆಜ್ ಹಾಕಿದ್ದ ...
ವೃತ್ತಿ ಯ
ಸಲುವಾಗಿ ಮಂಗಳೂರು ಗೆ ಹೋಗಿ ದ್ದ ಕಾರಣ ರಕ್ತ ದಾನದ ಅವಕಾಶ ಸಿಕ್ಕಿತು.. ಜೀವನದ
ಮೂವತ್ತೆರಡನೇ ಬಾರಿ ರಕ್ತ ದಾನ ಮಾಡಿದ್ದಿನಿ ತುಂಬಾ ಖುಷಿ ಯಾಗುತ್ತಿದೆ ಹೆಮ್ಮೆ
ಎನಿಸುತ್ತದೆ ಯಾಕೆಂದರೆ ಆರೋಗ್ಯಕರ ಜೀವನ ನನ್ನದೆಂದು.. ಆ ಜಾನಕಿಯಮ್ಮನ ಮನೆಯವರ
ಮುಂದೆ ಪ್ರೀತಿ ವಿಶ್ವಾಸ ಮುಂದೆ ನಾನು ಮೌನಿ..ಆದರೆ ಅವರೊಂದಿಗೆ ನಾನು ಕಠಿಣ ಷರತ್ತು
ವಿಧಿಸಿದ್ದೆನೆ ...ಮಿತ್ರರಿಗೆ ಯಾರಿಗೂ ಆಗಲಿಸುಳ್ಯದ ಆಸುಪಾಸಿನ ಮಿತ್ರ ರಿಗೆ ರಕ್ತ ದ
ಅವಶ್ಯಕತೆ ಇದ್ದಾಗ ನಾನು ನಿಮಗೆ ಕರೆಮಾಡುವೆನು ಆಗ ನಾನು ನಿಮ್ಮಿಂದ ಸಹಾಯ ಕೋರುತ್ತೆನೆ
ಎಂದು ಹೇಳಿ ತನ್ನ ವೃತ್ತಿ ಯತ್ತ ಮುಖಮಾಡಿದೆ
ಯಾವುದೇ ರೋಗಗಳಿಲ್ಲ,ಸಮತೋಲಿತ ಆಹಾರ. ರಕ್ತದಾನ ಅಷ್ಟೇ ,ಸಂತೃಪ್ತ ಆರೋಗ್ಯ ಇವೇ ಜೀವನದ ಒಳಗುಟ್ಟು.....
ನನ್ನ ಮನವಿ ಯೊಂದೆ ..ನೀವು ರಕ್ತ ದಾನ ಮಾಡಿ... ಉತ್ತಮ ಗುಣಮಟ್ಟದ ಆರೋಗ್ಯ ನಿಮ್ಮದಾಗುತ್ತದೆ..
ನನಗೆ ರಕ್ತದಾನಕ್ಕೆ ಪ್ರೇರಣೆ ಗೆ ಕೊಟ್ಟವರಿಗೆ ಧನ್ಯವಾದಗಳು...
ನಿಮ್ಮವನು
No comments:
Post a Comment