Search This Blog

Sunday, September 4, 2011


ಮನಸ್ಸು ಕೇಳಿತು, ನೀನು ಯಾರು ಎಂದು ?
ನಾನು ಹೇಳಿದೆ, ಅದು ನಾನೆ ಎಂದು..
ಮನಸ್ಸು ಕೇಳಿತು, ನಾನು ಯಾರು ಎಂದು ?
ನಾನು ಹೇಳಿದೆ, ಅದು ನೀನೆ ಎಂದು..
ಮನಸ್ಸು ಕೇಳಿತು, ನಿನ್ನ ಸ್ನೇಹಿತರು ಯಾರು ಎಂದು ?
ನಾನು ಹೇಳಿದೆ, ಒಳ್ಳೆಯ ಮನಸ್ಸು ಇರುವವರು ಎಂದು..
ಮನಸ್ಸು ಕೇಳಿತು, ನನ್ನ ಸ್ನೇಹ ಮಾಡುತ್ತಿಯ ಎಂದು....
ನಾನು ಹೇಳಿದೆ, ಒಳ್ಳೆಯ ಮನಸ್ಸಿದ್ದರೆ ಸರಿ ಎಂದು....
ಮನಸ್ಸು ಹೇಳಿತು, ಮನಸ್ಸುಗಳ ಮಾತೇ ಮಧುರ....
ನಾನು ಕೇಳಿದೆ, ಆ ಮಧುರವಾದ ಮಾತುಗಳನ್ನು....
ಮಾತನಾಡುವವರು ಯಾರಿದ್ದಾರೆ ಇಲ್ಲಿ ಎಂದು....
ಮನಸ್ಸು ಹೇಳಿತು, ಒಳ್ಳೆಯ ಮನಸ್ಸಿರುವವರು....
ಹುಡುಕಿದರೆ ಖಂಡಿತವಾಗಿಯೂ ಸಿಗುತ್ತಾರೆ ಎಂದು..
ನಾನು ಈಗ ಆ ಒಳ್ಳೆಯ ಮನಸ್ಸಿರುವವರನ್ನು....
ಹುಡುಕುತಿದ್ದೇನೆ. ನಿಮಗೆ ನನ್ನೊಡನೆ ಮತ್ತು....
ನನ್ನ ಮನಸ್ಸಿನೊಡನೆ ಮಾತನಾಡುವ ಮನಸ್ಸು..
ಇದ್ದರೆ ನನ್ನ ಸ್ನೇಹ ಮಾಡಿ. ಮನಸ್ಸಿನ ಮಧುರ..
ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನನ್ನೊಡನೆ..
ಮತ್ತು ನನ್ನ ಮನಸ್ಸಿನೊಡನೆ ಮಾತನಾಡಿ. ನನ್ನ ಆ..
ಮಧುರ ಮನಸ್ಸಿನ ಸ್ನೇಹ ಮಾಡಿ. ಮನಸ್ಸನ್ನು ಗೆದ್ದು..
ಮನಸ್ಸಿನಲ್ಲಿ ಮನೆ ಮಾಡಿ ಎಂದು ನಿಮ್ಮ ಮನಸ್ಸನ್ನು..
ಕೇಳುವ ಒಂದು ಒಳ್ಳೆಯ ಮನಸ್ಸಿನ ram

ನಾನು..
ನನ್ನ ಮನಸ್ಸಿನ್ನ ಸ್ನೇಹ ಮಾಡುವ ಮನಸ್ಸು ಯಾರಿಗಿದೆ ?
ಒಳ್ಳೆಯ ಮನಸ್ಸಿದ್ದರೆ ಸ್ನೇಹ ಮಾಡಿ. ಇಲ್ಲವಾದರೆ ಮರೆತುಬಿಡಿ.
ಮನಸ್ಸಿನೊಡನೆ ಸ್ನೇಹ ಮಾಡಿ .

No comments: